ಪಿ.ಸಿ.ಶೇಖರ್ ನಿರ್ದೇಶನದ``BAD``ಚಿತ್ರದ ಟ್ರೇಲರ್ ಜನವರಿ 12 ರಂದು ಬಿಡುಗಡೆ
Posted date: 09 Tue, Jan 2024 11:43:19 PM
ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ "BAD" ಚಿತ್ರದ ಟ್ರೇಲರ್ ಜನವರಿ 12 ರಂದು ಜೆಂಕಾರ್‌ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಟ್ರೇಲರ್ ನಲ್ಲಿ ಏನೆಲ್ಲಾ ಇರಬಹುದು? ಎಂಬದನ್ನು ತಿಳಿಸಲು ಚಿತ್ರತಂಡ ಪ್ರೋಮೊ ಬಿಡುಗಡೆ ಮಾಡಿದೆ. ಈ ಪ್ರೋಮೊದಲ್ಲಿ ನಿರ್ದೇಶಕರಾದ ಪಿ.ಸಿ.ಶೇಖರ್ ಹಾಗೂ ನಾಯಕರಾದ ನಕುಲ್ ಗೌಡ ಸುಂದರವಾದ ನಿರೂಪಣೆಯಲ್ಲಿ "BAD" ಚಿತ್ರದ ಟ್ರೇಲರ್ ನ ವೈಶಿಷ್ಟ್ಯತೆ  ಹಾಗು ತಾಂತ್ರಿಕ ವಿಭಿನ್ನತೆಯ ಮಾಹಿತಿ ನೀಡಿದ್ದಾರೆ‌. ಈ ಪ್ರೋಮೊ ನೋಡಿದ ಮೇಲೆ ಚಿತ್ರದ ಬಗ್ಗೆ ಹಾಗೂ ಬಿಡುಗಡೆಯಾಗಲಿರುವ ಟ್ರೇಲರ್ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.      
 
ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ "BAD" ಚಿತ್ರಕ್ಕೆ ಪಿ.ಸಿ.ಶೇಖರ್ ಸಂಕಲನ,  ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿದೆ‌. ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ  ಸಂಭಾಷಣೆ ಬರೆದಿದ್ದಾರೆ. 

"ಪ್ರೀತಿಯ ರಾಯಭಾರಿ" ಚಿತ್ರದ ಮೂಲಕ ಜನರ ಮನಗೆದ್ದಿರುವ  ನಕುಲ್ ಗೌಡ  "BAD" ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed